ಅಭಿವೃದ್ಧಿ ಆಡಳಿತ
ಅರ್ಥ
ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಆಡಳಿತವನ್ನು ಅಭಿವೃದ್ಧಿ ಆಡಳಿತ ಎಂದು ಕರೆಯಲಾಗುತ್ತದೆ . ಅಭಿವೃದ್ಧಿಶೀಲ ರಾಷ್ಟ್ರಗಳು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಆಡಳಿತವನ್ನು ಅಭಿವೃದ್ಧಿ ಆಡಳಿತ ಎನ್ನಲಾಗುತ್ತದೆ .
ಜಾರ್ಜ್ ಗ್ರಾಂಟ್ : ಅಭಿವೃದ್ಧಿ , ಉದ್ದೇಶಗಳನ್ನು ಈಡೇರಿಸುವ ನೀತಿಗಳ ಕಾರ್ಯಕ್ರಮಗಳು ಮತ್ತು ಯೋಜನೆಗಳು ನಿರ್ವಹಣೆಯೇ ಅಭಿವೃದ್ಧಿ ಆಡಳಿತ ಸಮಗ್ರ , ಸಂಘಟಿತ ಮತ್ತು ನಿರ್ದೇಶಿತ ಸರ್ಕಾರಿ ಕ್ರಮಗಳ ಮೂಲಕ ಬದಲಾವಣೆಯನ್ನು ತರುವುದು ಅಭಿವೃದ್ಧಿ ಆಡಳಿತದ ಮೂಲತತ್ಯ , ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸರ್ಕಾರಗಳು ಯೋಜಿತ ಬದಲಾವಣೆಯ ಮೂಲಕ ಅಭಿವೃದ್ಧಿಯತ್ತ ತಮ್ಮ ಗಮನ ಕೇಂದ್ರೀಕರಿಸಿವೆ .
ಆದರೆ ಸಾಂಪ್ರದಾಯಿಕ ಆಡಳಿತವು ಹಲವಾರು ಮಿತಿಗಳನ್ನು ಹೊಂದಿದ್ದು , ಸರ್ಕಾರದ ಬೆಳೆಯುತ್ತಿರುವ ಕಲ್ಯಾಣ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಅದು ಸಫಲವಾಗಲಿಲ್ಲ . ಆದ್ದರಿಂದ ಅಭಿವೃದ್ಧಿ ಆಡಳಿತವನ್ನು ಸೃಜಸಲಾಗಿದ್ದು , ಇದು ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಸಾಧನವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಅಭಿವೃದ್ಧಿ ಆಡಳಿತವು ಸಮಾಜದಲ್ಲಿ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಬದಲಾವಣೆಗಳನ್ನು ತರುವ ಸಾಧನವಾಗಿದೆ .ಇದು ಜನರ ಅಗತ್ಯತೆಗಳ ಮೇಲೆ ತನ್ನ ಗಮನ ಕೇಂದ್ರೀಕರಿಸುತ್ತದೆ ಮತ್ತು ಅದರಂತೆ ಯೋಜನೆಗಳು , ಕಾರ್ಯಕ್ರಮಗಳು , ನೀತಿಗಳನ್ನು ರೂಪಿಸುತ್ತದೆ , ಅವುಗಳನ್ನು ಅನುಷ್ಠಾನಕ್ಕೆ ತರುತ್ತದೆ .
ಹೀಗೆ ಯೋಜಿತ ಬದಲಾವಣೆಯನ್ನು ತರುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ , ಅಭಿವೃದ್ಧಿ.

ಆಡಳಿತದ ವೈಶಿಷ್ಟ್ಯಗಳು / ಲಕ್ಷಣಗಳು :
೧ . ಬದಲಾವಣೆ - ದೃಷ್ಟಿಕೋನ :
ಅಭಿವೃದ್ಧಿ ಆಡಳಿತವು ಸಾಂಪ್ರದಾಯಿಕ ಆಡಳಿತದಂತೆ ನಿಶ್ಚಲ / ಯಥಾಸ್ಮಿತಿಯ ಸಾಮಾಜಿಕ ಸ್ಥಿತಿಯ ಬದಲಾಗಿ ಬದಲಾವಣೆ ದೃಷ್ಟಿಕೋನವನ್ನು ಹೊಂದಿದ್ದು , ಹೊಸ ಸಾಮಾಜಿಕ ಕ್ರಮವನ್ನು ಸ್ಥಾಪಿಸುವ ಗುರಿ ಹೊಂದಿದೆ . ಆಡಳಿತದ ರಚನಾತ್ಮಕ ಮರುಸಂಘಟನೆ , ಉತ್ಪಾದನೆಯನ್ನು ಹೆಚ್ಚಿಸಲು ನವೀನ ಕಾರ್ಯಕ್ರಮಗಳು , ನಿರುದ್ಯೋಗ & ಬಡತನ ನಿರ್ಮೂಲನೆ ಇತ್ಯಾದಿ ಬದಲಾವಣೆಗಳನ್ನು ತರುವುದು ಅಭಿವೃದ್ಧಿ ಆಡಳಿತದ ಒಂದು ಭಾಗವಾಗಿರುತ್ತದೆ .

೨ . ಗುರಿ ಆಧಾರಿತವಾದುದು :
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಬಡತನ , ಅಸಮಾನತೆ , ಸಂಪತ್ತಿನ ಅಸಮಾನ ಹಂಚಿಕೆ , ಹಳೆಯ ತಂತ್ರಜ್ಞಾನ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿವೆ . ಈ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವ ಮೂಲಕ ಅಭಿವೃದ್ಧಿ ಆಡಳಿತವು ಅಭಿವೃದ್ಧಿಯ ಗುರಿಗಳಾದ ಸಾಮಾಜಿಕ ನ್ಯಾಯ , ಆಧುನೀಕರಣ , ಕೈಗಾರಿಕೀಕರಣ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ .
೩ . ನಾವೀನ್ಯತೆಯನ್ನು ಹೊಂದಿರುತ್ತದೆ :
ಅಭಿವೃದ್ಧಿ ಆಡಳಿತವು ಅಸ್ತಿತ್ವದಲ್ಲಿರುವ ಆಡಳಿತ ರಚನೆಗಳನ್ನು ಸುಧಾರಿಸುವತ್ತ ಗಮನಹರಿಸುತ್ತದೆ . ಇದರಿಂದಾಗಿ ಹೊಸ ವಿಧಾನಗಳು , ಕಾರ್ಯವಿಧಾನಗಳು , ತಂತ್ರಗಳು , ನೀತಿಗಳು , ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ . ಹೇಗೆ ಅಭಿವೃದ್ಧಿಯ ಪೂರ್ವ ನಿರ್ಧಾರಿತ ಉದ್ದೇಶಗಳನ್ನು ಸಾಕಾರಗೊಳಿಸಲು ಅಭಿವೃದ್ಧಿ ಆಡಳಿತವು ಸಾಕಷ್ಟು ನವೀನತೆಯನ್ನು ಹೊಂದಿರುತ್ತದೆ . ಇದರಿಂದಾಗಿ ಅಭಿವೃದ್ಧಿಯ ಉದ್ದೇಶಗಳು ಮತ್ತು ಗುರಿಗಳನ್ನು ಅತ್ಯಂತ ಕಡಿಮೆ ಸಂಪನ್ಮೂಲಗಳೊಂದಿಗೆ ಕಡಿಮೆ ಸಮಯದಲ್ಲಿ ಸಾಧಿಸಬಹುದಾಗಿದೆ .
4 . ಕಕ್ಷಿದಾರ ಕೇಂದ್ರಿತವಾದುದು :
ಅಭಿವೃದ್ಧಿ ಆಡಳಿತದ ಗುರಿಯು ಉದ್ರಶಿತ ಗುಂಪುಗಳ ಅಗತ್ಯತೆಗಳನ್ನು ಪೂರೈಸುವುದಾಗಿದೆ . ಅಂದರೆ ಭೂಹೀನ ಕೃಷಿ ಕಾರ್ಮಿಕರು , ಸಣ್ಣ ಮತ್ತು ಅತಿಸಣ್ಯ ರೈತರು ಮತ್ತು ಗ್ರಾಮೀಣ ಕುಶಲಕರ್ಮಿಗಳು ಇತ್ಯಾದಿ ದುರ್ಬಲ ವರ್ಗದವರ ಸಾಮಾಜಿಕ - ಸಾಂಸ್ಕೃತಿಕ ಮತ್ತು ರಾಜಕೀಯ - ಆರ್ಥಿಕ ಪ್ರಗತಿಯು ಅಭಿವೃದ್ದಿ ಆಡಳಿತದ ಗುರಿಯಾಗಿದೆ . ಆದ್ದರಿಂದ ಇದು ಈ ರೀತಿ ಫಲಾನುಭವಿಗಳ ಅಗತ್ಯಗಳಿಗೆ ಆದ್ಯತೆ ನೀಡುತ್ತದೆ ಹಾಗೂ ಅವರ ಅಗತ್ಯತಗೆ ತಕ್ಕಂತೆ ಕಾರ್ಯಕ್ರಮಗಳು , ಚಟುವಟಿಕೆ ಮತ್ತು ನೀತಿಗಳನ್ನು ಬದಲಾಯಿಸುತ್ತದೆ . ಇದು ವಂಚಿತರು ಮತ್ತು ದುರ್ಬಲರ ಸುಧಾರಣೆಯಲ್ಲಿ ತೊಡಗಿಕೊಂಡಿರುತ್ತದೆ . ಅವರ ಉನ್ನತಿ ಇಡೀ ಆಡಳಿತ ನೀತಿಯ ಒಂದು ಭಾಗವಾಗಿರುತ್ತದೆ .
೫ . ಜನರ ಸಹಭಾಗಿತ್ವ ಆಧಾರಿತವಾದುದು:
ಅಭಿವೃದ್ಧಿ ಯೋಜನೆಗಳು , ನೀತಿಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜನರು ಸಕ್ರಿಯವಾಗಿ ಭಾಗವಹಿಸುವುದನ್ನು ಪ್ರೇರೇಪಿಸುತ್ತದೆ . ಕೇಂದ್ರೀಕೃತ ಆಡಳಿತವು ಸ್ಥಳೀಯ ಸಮಸ್ಯೆಗಳನ್ನು ವಾಸ್ತವಿಕ ಚೌಕಟ್ಟಿನಲ್ಲಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ . ಆದ್ದರಿಂದ ಸ್ಮಳೀಯ ಜನರ ಸಹಾಯ ಮತ್ತು ಸಹಯೋಗದೊಂದಿಗೆ ಅಭಿವೃದ್ಧಿ ಆಡಳಿತವು ಕಾರ್ಯಪ್ರವೃತ್ತವಾಗುತ್ತದೆ . ಇದರಿಂದಾಗಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತದೆ . . ಅದಕ್ಕಾಗಿಯೇ ಯೋಜನೆ ಮತ್ತು ಆಡಳಿತದಲ್ಲಿ ಪಂಚಾಯತಿ ರಾಜ್ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಭಾರತದ ಅಭಿವೃದ್ದಿ ಕಾರ್ಯತಂತ್ರದಲ್ಲಿ ಭಾಗವಾಗಿದೆ .
೬ . ಸಮನ್ವಯತೆ :
ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಏಜೆನ್ಸಿಗಳು ಮತ್ತು ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ . ಇಂತಹ ಆಡಳಿತ ವ್ಯವಸ್ಥೆಯ ಗರಿಷ್ಟ ಲಾಭವನ್ನು ಪಡೆಯಬೇಕಾದರೆ ವಿವಿಧ ಆಡಳಿತ ಘಟಕಗಳು ಮತ್ತು ಚಟುವಟಿಕಗಳ ನಡುವೆ ಸಮನ್ವಯ ಅಗತ್ಯ . ಇದರಿಂದಾಗಿ ಸಂಪನ್ಮೂಲಗಳುಹಾಗೂ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು . ಹೇಗೆ ಅಭಿವೃದ್ಧಿ ಗುರಿಗಳ ಸಾಕಾರಕ್ಕಾಗಿ ವಿವಿಧ ಸಂಸ್ಥೆಗಳ ಪ್ರಯತ್ನಗಳು ಮತ್ತು ಶಕ್ತಿಯನ್ನು ಸಂಯೋಜಿಸಲು ಆಡಳಿತವನ್ನು ಸಂಘಟಿಸಲಾಗುತ್ತದೆ . ಇದು ಆಡಳಿತಾತ್ಮಕ ವಿಳಂಬವನ್ನು ಕಡಿಮ ಮಾಡುತ್ತದೆ . ಇದು ಅಭಿವೃದ್ಧಿ ಆಡಳಿತದ ಒಂದು ವೈಶಿಷ್ಟ್ಯವಾಗಿದೆ.
೭ . ವೃತ್ತಿಪರ ಸಿಬ್ಬಂದಿ :
ತನ್ನ ಗುರಿಗಳ ಸಾಧನೆಗಾಗಿ ವೈವಿಧ್ಯಮಯ ಹಾಗೂ ವೃತ್ತಿಪರ ಸಿಬ್ಬಂದಿಯನ್ನ ಹೊಂದಿರುತ್ತದೆ . ಇವು ಅಭಿವೃದ್ಧಿ ಆಡಳಿತದ ವಿಶಿಷ್ಟ ಲಕ್ಷಣವಾಗಿವೆ ಹೀಗೆ ಅಭಿವೃದ್ಧಿ ಆಡಳಿತವು ಅಭಿವೃದ್ಧಿಯ ಗುರಿಗಳ ಸಾಧನೆಗೆ ಹಾಗೂ ಅಭಿವೃದ್ಧಿಯ ಉದ್ದೇಶಗಳ ಈಡೇರಿಕೆಗಾಗಿ ವಿಶಿಷ್ಟವಾದ ಲಕ್ಷಣಗಳನ್ನು ಹೊಂದಿದ . ಹೀಗೆ ಅಭಿವೃದ್ಧಿ ಆಡಳಿತ ಸಾಂಪ್ರದಾಯಿಕ ಆಡಳಿತಕ್ಕಿಂತ ಭಿನ್ನವಾಗಿದೆ . ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಆರಂಭಿಸಿ , ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಇದು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ .

ಅಭಿವೃದ್ಧಿ ಆಡಳಿತದ ಮಹತ್ವ
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸರ್ಕಾರದ ಗುರಿ ಮತ್ತು ಚಟುವಟಿಕೆಗಳು ಅಭಿವೃದ್ಧಿ ಕೇಂದ್ರಿತವಾಗಿದ್ದು , ಈ ಅಭಿವೃದ್ಧಿಯ ಗುರಿಯನ್ನು ಈಡೇರಿಸುವಲ್ಲಿ ಅಭಿವೃದ್ಧಿ ಆಡಳಿತದ ಪಾತ್ರವು ಬಹಳ ಮಹತ್ವದ್ದಾಗಿದೆ .
1.ಅಭಿವೃದ್ಧಿಗೆ ನವೀನ ತಂತ್ರಗಳ ಅನ್ವಯ
2. ತಳಮಟ್ಟದಲ್ಲಿ ಅಭಿವೃದ್ಧಿಗೆ ಒತ್ತು .
3. ಲಭ್ಯವಿರುವ ವಿರಳ ಸಂಪನ್ಮೂಲಗಳ ಪರಿಣಾಮಕಾರಿ ಮತ್ತು ಪರಿಣಾಮಕಾರಿ ಬಳಕೆ
4. ಜನಸಂಖ್ಯೆಯ ಮೂಲಭೂತ ಅಗತ್ಯಗಳನ್ನು ಪೂರೈಸುತ್ತದೆ .
5. ಅಗತ್ಯವಿರುವ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ . ಹಾಗೂ ವ್ಯವಸ್ಥಿತವಾಗಿ ಜಾರಿಗೊಳಿಸುತ್ತದೆ
6. ಗ್ರಾಮೀಣ ಜನರಿಗೆ ವಿಸ್ತರಣಾ ಸೇವೆಗಳನ್ನು ಒದಗಿಸುತ್ತದೆ ಹಲವಾರು
7. ಮೂಲಭೂತ ಸೌಕರ್ಯಗಳನ್ನೂ ಒಳಗೊಂಡಂತೆ ಸಮುದಾಯಸೇವೆಗಳನ್ನು ಒದಗಿಸುತ್ತದೆ .
8. ಹಿಂದುಗಳಿದ ಪ್ರದೇಶಗಳಲ್ಲಿ ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ನಿರ್ವಹಣೆ - ಪ್ರಾದೇಶಿಕ ಅಸಮತೋಲನ ನಿವಾರಣೆ
9. ಸಾರ್ವಜನಿಕ ಆರೋಗ್ಯ , ಶಿಕ್ಷಣ , ನೈರ್ಮಲ್ಯ ಕುಡಿಯುವ ನೀರು ಮುಂತಾದ ಮೂಲಸೌಕರ್ಯಗಳನ್ನು ಒದಗಿಸುತ್ತದೆ .
10. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅದರ ಸದ್ಬಳಕೆ
11. ಬಡತನ , ನಿರುದ್ಯೋಗ , ಅಸಮಾನತೆ ನಿವಾರಣೆ ಉದ್ಯೋಗಸೃಷ್ಟಿ ಕಾರ್ಯಕ್ರಮಗಳ ಅನುಷ್ಠಾನ
12. ಗ್ರಾಮೀಣ ನಿರುದ್ಯೋಗಿಗಳು ಸ್ವ - ಉದ್ಯೋಗವನ್ನು ಕೈಗೊಳ್ಳಲು ಸಹಾಯ ನೀಡುತ್ತದೆ . ಹೀಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಟ್ಯಾರ ಸಾಮಾಜಿಕ , ಸಾಂಸ್ಕೃತಿಕ , ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಹಾಗೂ ಜನರ ಜೀವನಮಟ್ಟವನ್ನು ಉತ್ತಮ ಪಡಿಸಲು ಅಭಿವೃದ್ಧಿ ಆಡಳಿತವು ಮಹತ್ತರ ಪಾತ್ರ ನಿರ್ವಹಿಸುತ್ತದೆ .